ರೋಮ್
ಪಶ್ಚಿಮ ಯುರೋಪಿನ ದಕ್ಷಿಣದಲ್ಲಿರುವ ಸರ್ವತಂತ್ರ ಸ್ವತಂತ್ರದೇಶ ಇಟಲಿಯ ರಾಜಧಾನಿ. ಸು. 2000 ವರ್ಷಗಳ ಇತಿಹಾಸವಿ ರುವ ಮಾನವ ಸಾಂಸ್ಕøತಿಕ ಕೇಂದ್ರ. ಕೆಥೊಲಿಕ್ ಧರ್ಮಗುರು ಪೋಪ್ ಇರುವ ವ್ಯಾಟಿಕನ್ ನಗರವನ್ನೊಳಗೊಂಡ ಧಾರ್ಮಿಕ ಕೇಂದ್ರ, ನಗರ ಹಾಗೂ ಐತಿಹಾಸಿಕ ಪ್ರಸಿದ್ಧ ಸುಂದರ ಸ್ಥಳ. ಟೆರಿನಿಯನ್ ಸಮುದ್ರಕ್ಕೆ ಪೂರ್ವದಲ್ಲಿ 16 ಕಿಮೀ ದೂರದಲ್ಲಿ ಮಧ್ಯಇಟಲಿಯ ಪ್ರಸಿದ್ಧವಾದ ಏಳು ಬೆಟ್ಟಗಳ ಪ್ರದೇಶದಲ್ಲಿ ಟೈಬರ್‍ನದಿಯ ಎರಡೂ ದಂಡೆಗಳ ಮೇಲೆ ಈ ಮಹಾನಗರವಿದೆ. 1508 ಚ.ಕಿಮೀ ವಿಸ್ತೀರ್ಣವುಳ್ಳ ಈ ನಗರದ ಜನಸಂಖ್ಯೆ 27,75,250. ಈ ನಗರ ಸಮುದ್ರಮಟ್ಟದಿಂದ ಸು. 187ಮೀ ಎತ್ತರದಲ್ಲಿದೆ. ದಕ್ಷಿಣದಲ್ಲಿ ಅಟ್ಲಾಂಟಾದಿಂದ ಜಾರ್ಜಿಯ ಕಡೆಗೆ ಹೊರಡುವ ರೈಲುಮಾರ್ಗದ ಮಧ್ಯದಲ್ಲಿದೆ. ಹಿಂದೆ ಇದು ಚೆರೂಕೀ ಗ್ರಾಮವಾಗಿದ್ದು 1847ರಲ್ಲಿ ನಗರವಾಯಿತು. ಇಟಲಿ ಪರ್ಯಾಯ ದ್ವೀಪದಲ್ಲಿರುವ ರೋಮ್ ಹಿಂದೆ ರೋಮನ್ ಸಾಮ್ರಾಜ್ಯವಾಗಿತ್ತು. ಟೈಬರ್ ನದಿ ಈ ನಗರ ಮಧ್ಯದಲ್ಲಿ ಹರಿಯುವುದು. ನಗರ ಭೂಪ್ರದೇಶ ಅಸಮ ಮೈದಾನದಿಂದಲೂ ವಾಯವ್ಯ ಗಡಿಯಲ್ಲಿ ಉತ್ತರ ಮತ್ತು ಪೂರ್ವದಲ್ಲಿ ಅಪೆನೈನ್ ಪರ್ವತದ ಇಳಿಜಾರಿನಿಂದಲೂ ಕೂಡಿದೆ. ಮಧ್ಯ ಇಟಲಿಯ ಪಶ್ಚಿಮದ ಪ್ರಮುಖ ಚಿರಾಯು ನಗರವೆನಿಸಿಕೊಂಡಿದೆ.

ಭೂಸ್ವರೂಪ: ಇದರ ಭೂಭಾಗ ಮೆಡಿಟರೇನಿಯನ್ ಸಮುದ್ರದೊಳಗೆ ಚಾಚಿಕೊಂಡಿರುವಂತಿದ್ದು ಮಧ್ಯರೋಮ್ ಎತ್ತರದ ಮೈದಾನವಾಗಿದೆ.

ರೋಮ್‍ನಗರ ನೈರುತ್ಯದಲ್ಲಿ ವೈಯಾಡೆಲ್ ಟೀಯಟ್ರೋ ಮಾರೆಸೆ ಲ್ಲೋವರೆಗೆ, ಪಶ್ಚಿಮದಲ್ಲಿ ವೈಯಾಡೆಲ್ ಪ್ಲೆಬಿಸ್ಕಿಟೋನಿಂದ ಟೈಬರನ ಮುಖಾಂತರ ಕೂರ್ಸೋ ವಿಟ್ಟೋರಿಯೋ ಎಮ್ಯೂ ನೆಲೆಯವರೆಗೆ ವಿಸ್ತರಿಸಿದೆ. ಇಲ್ಲಿ ಕ್ಯಾವಬೋಲಿನ್‍ಬೆಟ್ಟ, ಮಾಂಟೆಪಿನ್ಸಿಯೋಬೆಟ್ಟ ಮತ್ತು ಸುಂದರವಾದ ಟ್ರಾಸಿಮನೊಗಾರ್ಡ, ಮಾಗ್ಗೈರಿ, ಕೋಮೋ ಸರೋವರ ಗಳು, ಕೆಲವು ಚಿಕ್ಕಪುಟ್ಟ ನದಿಗಳು ಕಂಡುಬರುವುದಲ್ಲದೆ, ಮಧ್ಯಕಾಲಿನ ಇತಿಹಾಸದ ಪ್ರಾಚೀನ ಬಾರೋಕ್ಸೂ ನಗರಗಳು ಕಂಡುಬರುತ್ತವೆ. ಈ ನಗರ ಹರಡಿರುವ 20 ಬೆಟ್ಟಗಳಲ್ಲಿ ಅವೆಂಟೀನ್, ಸೀಲೀಯನ್ ಕಾಸಟೊಲೀಯಮ್, ಎಸ್‍ಕ್ವಾಲಿನ್, ಪಾಲತೀನ್, ಕ್ವಿರ್ ಅನಲ್ ಮತ್ತು ವಿಮಿನಲ್-ಈ ಏಳು ಬೆಟ್ಟಗಳ ಮೇಲೆ ಪುರಾತನ ರೋಮ್ ನಗರವನ್ನು ನಿರ್ಮಿಸಿದ್ದು ಇದನ್ನು ಏಳು ಬೆಟ್ಟಗಳ ನಗರವೆಂದು ಕರೆಯಲಾಗಿದೆ. ರೋಮನ್ ನಾಗರಿಕತೆಗೆ ಹೆಸರುವಾಸಿಯಾಗಿದ್ದು ಅನೇಕ ಅರಮನೆಗಳು, ಸುಂದರ ಮತ್ತು ಬೃಹತ್ ಚರ್ಚ್‍ಗಳನ್ನೂ ಒಳಗೊಂಡಿದೆ. ಗ್ರಾನ್‍ಸಾಸೋ ಸು. 2913 ಮೀ, ಮೈಲ್ಲಾ ಸು. 2794 ಮೀ ಪರ್ವತಗಳು ಕಂಡುಬರುತ್ತವೆ.

ರೋಮ್ ನಗರವನ್ನು ಮೂರು ಹಂತವಾಗಿ ವಿಂಗಡಿಸಲಾಗಿದೆ. ಪಿನ್ಸಿಯೋ ಶ್ರೀಮಂತ ರೆಸಿಡೆನ್ಷಿಯಲ್ ನಗರವಾಗಿದ್ದು, ಬೃಹತ್ ತೋಟ ಗಳು, ಹೊಟೇಲ್‍ಗಳು ಇರುವ ಶ್ರೀಮಂತರ ನಿವಾಸಗಳಾಗಿವೆ. ಈಶಾನ್ಯದಲ್ಲಿ ಪೊರ್ಟೊಪೈ, ಪೊರ್ಟೋ, ಸಾಲಾರೈ ಪ್ರದೇಶಗಳಲ್ಲಿ ಮಧ್ಯಮ ವರ್ಗದ ಜನರು ಇದ್ದರೆ, ಪೊರ್ಟೋಸನ್, ಗಿಯಾವನ್ನಿ, ಪೊರ್ಟಾಸೆನ್ ಲೋರ್ನೆಜೋ, ಪೊರ್ಟೋಗ್ಗೊೈರೀಗಳು ಬಡಜನರ ಮತ್ತು ಕಾರ್ಮಿಕ ವರ್ಗದವರ ನೆಲೆಯಾಗಿದೆ. ಇಲ್ಲಿನ ಅತ್ಯಾಧುನಿಕ ನಗರಗ ಳೆಂದರೆ ಟೈಬರ್ ನದಿಯ ಬಲದಂಡೆ ಮೇಲಿರುವ ಮಾಂಬೇವೆರ್ಡಿ ವ್ಯಾಟಿಕನ್ ನಗರದ ದಕ್ಷಿಣದ ಜನಿಕುಲುಮ್, ಅನೈನ್ ನದಿಯ ದಡದ ಮಾಂಟೇಸಾಕ್ರೆಗಳು ಮುಖ್ಯವಾಗಿವೆ.

ವಾಯುಗುಣ: ರೋಮ್ ಮೆಡಿಟರೇನಿಯನ್ ಸಮಶೀತೋಷ್ಣದ ಬೆಚ್ಚನೆಯ ಉತ್ತಮ ವಾಯುಗುಣವನ್ನು ಹೊಂದಿದೆ. ಚಳಿಗಾಲ ಸಾಧಾರಣವಾಗಿದ್ದು ಬೆಚ್ಚನೆಯ ವಾಯುಗುಣ ಕಂಡುಬರುತ್ತದೆ. ಇಲ್ಲಿ ಚಳಿಗಾಲದಲ್ಲಿ ಮಳೆ ಬೀಳುವುದುಂಟು. ವಾರ್ಷಿಕ ಸರಾಸರಿ ಮಳೆ   770.5 ಮಿಮೀ. ಜನವರಿಯ ಸರಾಸರಿ ಉಷ್ಣಾಂಶ 53.40ಈ ಇದ್ದರೆ, ಜುಲೈ ಬೇಸಗೆ ಕಾಲವಾಗಿದ್ದು ಒಣ ಹವೆಯಿಂದ ಕೂಡಿದ್ದು 76.30ಈ ಉಷ್ಣಾಂಶವಿರುತ್ತದೆ. ವಾರ್ಷಿಕ ಸರಾಸರಿ ಉಷ್ಣಾಂಶ ರೋಮ್‍ನಲ್ಲಿ 810ಈ.

ಸ್ವಾಭಾವಿಕ ಸಸ್ಯವರ್ಗ: ರೋಮ್ ನಗರ ಪ್ರದೇಶವಾಗಿದ್ದು ಸುಂದರ ತೋಟಗಳನ್ನು ಹೊಂದಿದೆ. ಪೊದೆಯಜಾತಿಗೆ ಸೇರಿದ ಅಲಂಕಾರಿಕ ಸಸ್ಯಗಳ ಬೆಳೆವಣಿಗೆ ಆಕರ್ಷಕ ಕೈ ತೋಟಗಳಿಗೆ ಪ್ರಸಿದ್ಧವಾಗಿದೆ.

ಜನಸಂಖ್ಯೆ: ರೋಮ್ ಇಟಲಿಯ ಪ್ರಮುಖ ಸಾಂಪ್ರದಾಯಿಕ ನಗರವಾಗಿ ಇಡೀ ದೇಶದಲ್ಲೇ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇಟಲಿಯ ನಗರಗಳಲ್ಲಿ ಸೇ 90 ಜನ ವಾಸಿಸುತ್ತಿದ್ದಾರೆ. ಇಲ್ಲಿನ ಜನರ ಜೀವಿತಾವಧಿ ಸರಾಸರಿ 80 ವರ್ಷಗಳು.

ಜನಾಂಗ: ರೋಮನ್ನರಲ್ಲಿ  ಇಟಲಿ ಜನಾಂಗದವರೆ ಪ್ರಮುಖ ವಾಗಿದ್ದಾರೆ. ಗ್ರೀಕ್ಸ್, ಸಾರಾಸೀನ್ಸ್ ಜನಾಂಗದವರೂ ಇದ್ದಾರೆ.

ಧರ್ಮ: ರೋಮನ್ ಕೆಥೊಲಿಕ್ ಪ್ರಮುಖ ಧರ್ಮವಾಗಿದ್ದು, ಬಿಷಪ್ ಧರ್ಮಾಧಿಕಾರಿಯಾಗಿದ್ದಾರೆ. ಪ್ರಪಂಚದ ಎಲ್ಲ ಕೆಥೊಲಿಕ್ ಕ್ರೈಸ್ತರ ಧರ್ಮಗುರು ಪೋಪ್ ಸೇಂಟ್ ಪಾಲ್ ಇಲ್ಲಿನ ವ್ಯಾಟಿಕನ್ ನಗರದಲ್ಲಿದ್ದಾರೆ.

ಭಾಷೆ: ಸೇ. 94.1 ಜನ ಬಳಸುವ ಇಲ್ಲಿನ ಇಟಾಲಿಯನ್ ರೋಮನ್ ಭಾಷೆ ಇಲ್ಲಿಯ ಆಡಳಿತ ಭಾಷೆಯಾಗಿದೆ. ಜೊತೆಗೆ ಜರ್ಮನ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳು ಕಂಡುಬರುತ್ತವೆ. ಲ್ಯಾಟಿನ್ ಬಳಕೆ ಸಾಧಾರಣವಾಗಿದೆ.

ಶಿಕ್ಷಣ: ರೋಮ್‍ನ ಶಿಕ್ಷಣ ಕ್ಷೇತ್ರದಲ್ಲಿ ಧಾರ್ಮಿಕ ತರಬೇತಿ ಶಾಲೆಗಳೇ ಹೆಚ್ಚಾಗಿವೆ. 1303ರಲ್ಲಿ ರೋಮ್ ವಿಶ್ವವಿದ್ಯಾಲಯವನ್ನು ಸ್ಥಾಪಿಸ ಲಾಯಿತು. 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಾಲಾ ಶಿಕ್ಷಣ ಕಡ್ಡಾಯ. ಕಾನೂನು, ಅಧ್ಯಾಪಕ ತರಬೇತಿ ಕಾಲೇಜುಗಳೂ ವಿವಿಧ ವಿಷಯಗಳ ಮತ್ತು ತಾಂತ್ರಿಕ ಶಾಲಾ ಕಾಲೇಜುಗಳೂ ಸಂಗೀತ, ನೃತ್ಯ, ಚಿತ್ರಕಲೆ, ಕೆತ್ತನೆ ಮುಂತಾದ ಲಲಿತಕಲೆಗಳ ಕಾಲೇಜುಗಳೂ ಇಲ್ಲಿವೆ. ಪ್ರಪಂಚದ ಪ್ರಮುಖ ಗ್ರಂಥಾಲಯಗಳಲ್ಲಿ ಒಂದಾದ ವ್ಯಾಟಿಕನ್‍ನಗರ ಗ್ರಂಥಾಲಯ 1400ರಲ್ಲಿ ಸ್ಥಾಪಿಸಲ್ಪಟ್ಟಿತು. ರೋಮಿನಲ್ಲಿ 9 ಸಾರ್ವಜನಿಕ ಗ್ರಂಥಾಲಯಗಳಿದ್ದು    ಸು. ಒಟ್ಟು 3 ಮಿಲಿಯನ್ ಗ್ರಂಥಗಳನ್ನು ಇಲ್ಲಿ ಶೇಖರಿಸಿಡಲಾಗಿದೆ. ರೋಮಿನಲ್ಲಿ ಸೇ. 98.8 ಗಂಡಸರು ಸೇ. 97.9 ಮಹಿಳೆಯರು ಅಕ್ಷರಸ್ಥರು.
ರೋಮ್ ನಗರದ ಆಡಳಿತ ಚುನಾಯಿತ ಸದಸ್ಯರಿರುವ ನಗರಾಡಳಿತ ಸಭೆಗೆ ಸೇರಿದೆ. ನಗರದಲ್ಲಿ ಟ್ರಾಲಿಗಳು, ಬಸ್ಸುಗಳು, ಖಾಸಗಿ ಮತ್ತು ಸರ್ಕಾರಿ ಸಾರಿಗೆ ವ್ಯವಸ್ಥೆ ಇದೆ. ವಿದ್ಯುತ್ ರೈಲು, ಟ್ರಾಮ್‍ಗಳಲ್ಲದೆ ಆಧುನಿಕ ಸಾರಿಗೆ ಸೌಲಭ್ಯಗಳು ಈ ನಗರದ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾರಣವಾಗಿವೆ.   

ಆರ್ಥಿಕತೆ: ಸರ್ಕಾರದ ಅಧೀನದಲ್ಲಿ ಕಾರ್ಮಿಕವರ್ಗವಿದ್ದು ಸೇ. 90ರಷ್ಟು ಮಂದಿ ಪ್ರವಾಸೋದ್ಯಮದಲ್ಲಿ ತೊಡಗಿದ್ದಾರೆ. ರೋಮ್ ಬೃಹತ್ ನಗರವಾಗಿದ್ದು ದೊಡ್ಡ ದೊಡ್ಡ ಹೊಟೇಲುಗಳಿಗೆ, ತಂಗುದಾಣಗಳಿಗೆ, ಪ್ರಸಿದ್ಧಿಯಾಗಿದ್ದು ಇಲ್ಲಿ ಪೋಪ್, ಪಾದ್ರಿ, ಬಿಷಪ್, ನನ್ ಮೊದಲಾದವ ರೆಲ್ಲರೂ ಚರ್ಚ್‍ಗಳಲ್ಲಿ ಧರ್ಮಭೋದನೆ ಮತ್ತು ಅದರ ವ್ಯವಸ್ಥೆ ಕಾರ್ಯಗಳಲ್ಲಿ ತೊಡಗಿರುವರು. ಸ್ವಲ್ಪ ಪ್ರಮಾಣದಲ್ಲಿ ಕುಶಲಕಲೆ, ಕಸೂತಿ, ಪುರಾತನ ಮಾದರಿಯ ಕಟ್ಟಡ ನಿರ್ಮಾಣ, ವಾಸ್ತುಶಿಲ್ಪ, ಕೆತ್ತನೆಕೆಲಸ, ನೆಲಹಾಸುಗಳ ಕುಸುರಿ, ಚರ್ಮ ಕೈಗಾರಿಕೆ, ವಿವಿಧ ಆಭರಣಗಳ ತಯಾರಿಕೆ, ಪುಸ್ತಕಗಳ ರಟ್ಟುಕಟ್ಟುವಿಕೆ, ಮುದ್ರಣ, ಲೋಹದ ಕೆಲಸ, ಪಿಂಗಾಣಿ ಸಾಮಾನು, ಕಾಗದ, ಯಂತ್ರಗಳ ತಯಾರಿಕೆ, ಆಹಾರೋತ್ಪನ್ನಗಳ ತಯಾರಿಕೆ (ವೈನ್, ಸಿರಪ್), ರಾಸಾಯನಿಕ ವಸ್ತುಗಳು ಮತ್ತು ಜವಳಿ ಕೈಗಾರಿಕೆಗಳು ಪ್ರಮುಖವಾದವು. ರೋಮ್‍ನ ಉದ್ಯಮದಲ್ಲಿ ಚಲನಚಿತ್ರ ತಯಾರಿಕೆ ಮುಖ್ಯವಾಗಿದ್ದು ಅನೇಕ ಮಂದಿಗೆ ಜೀವನೋಪಾಯವಾಗಿದೆ. ಪ್ರಪಂಚದ ವಿವಿಧ ದೇಶಗಳ ಜನ ಇಲ್ಲಿಗೆ ಬಂದು ಚಲನಚಿತ್ರ ತೆಗೆಯುವುದುಂಟು.

ರೋಮ್ ಪ್ರಪಂಚದ ಪುರಾತನ ಕಲೆಗೆ ಪ್ರಸಿದ್ಧಿಯಾಗಿದೆ. ಪೋಪ್ ಜಾರ್ಜ್ ಘಿIII ಎಂಬಾತನ ಕಾಲದಲ್ಲಿ ಅನೇಕ ಸಂಸ್ಥೆಗಳು ಅಭಿವೃದ್ಧಿ ಹೊಂದಿದವು. ಪ್ರಪಂಚದ ಪ್ರಮುಖ ಗ್ರಂಥಾಲಯಗಳಾದ “ಬಿಬ್ಲಿಯೋತಿಕ ನಜಿûಯಾನಾಲ್ ಸೆಂಟ್ರಲ್ ವಿಟ್ಟೋರಿಯೋ” ಎಮಿನೇಲೇ II, ಜೊತೆಗೆ ಪ್ಲಾರೆನ್ಸ್‍ನ ಬಿಬ್ಲಿಯೋತಿಕ ಜಿûಯಾನಾಲೆ ಸೆಂಟ್ರಲ್ ಲೈಬ್ರರಿ ಬೃಹತ್ ಪ್ರಾಚೀನ ಇತಿಹಾಸದ ಗ್ರಂಥಾಲಯಗಳಾಗಿದ್ದು 15,00,000 ಪುಸ್ತಕಗಳನ್ನು ಒಳಗೊಂಡಿವೆ. “ದ ಬಿಬ್ಲಿಯೋತಿಕ ಅಲೆಕ್ಸಾಂಡ್ರಿನಾ ಲೈಬ್ರರಿ” 1667ರಲ್ಲಿ ಪೋಪ್ ಅಲೆಗ್ಸಾಂಡರ್  ಗಿII ಎಂಬಾತನಿಂದ ಸ್ಥಾಪಿಸಲ್ಪಟ್ಟಿದ್ದು 3,36,000 ಪುಸ್ತಕಗಳನ್ನು ಹೊಂದಿದೆ. ವ್ಯಾಟಿಕನ್ ನಗರ ವ್ಯಾಟಿಕನ್ ಲೈಬ್ರರಿಯನ್ನು ಹೊಂದಿದ್ದು 5,00000 ಗ್ರಂಥಗಳನ್ನೂ 60000 ಅಪೂರ್ವ ದಾಖಲೆಗಳನ್ನೂ ಹೊಂದಿದೆ.
ಮ್ಯೂಸಿಯಂ ಮತ್ತು ಗ್ಯಾಲರಿಗಳು: ರೋಮ್‍ನ ಪುರಾತತ್ತ್ವ ಇಲಾಖೆಗೆ ಸೇರಿದ ವಿವಿಧ ವಸ್ತುಸಂಗ್ರಹಾಲಯಗಳೂ ಚಿತ್ರ ಪ್ರದರ್ಶನಾಲ ಯಗಳೂ ಇಲ್ಲಿವೆ. ರೋಮ್‍ನಲ್ಲಿರುವ ವಿವಿಧ ವಸ್ತುಸಂಗ್ರಹಾಲಯಗಳೂ ಚಿತ್ರಕಲಾ ಪ್ರದರ್ಶನಾಲಯಗಳೂ ಪ್ರಪಂಚ ಪ್ರಸಿದ್ಧವೂ ಬಹು ಅಮೂಲ್ಯವಾದವೂ ಆಗಿವೆ. ವ್ಯಾಟಿಕನ್ ಅರಮನೆಯಲ್ಲಿ ಲಿಯನಾರ್ಡೊ ಡ ವಿಂಚಿ, ಮೈಕೆಲಂಜೆಲೋ ಮತ್ತು ರಾಫೆಲ್ ಇಂಥ ಮಹನೀಯರ ಅಮೋಘವಾದ ಚಿತ್ರಗಳನ್ನು ಹಾಕಿದ್ದಾರೆ. 1471ರಲ್ಲಿ ರೋಮ್‍ನ ಪ್ರಥಮ ವಸ್ತುಸಂಗ್ರಹಾಲಯ ಕ್ಯಾಪಿಟೊಲೈನ್ ಪ್ರಾರಂಭವಾಯಿತು. ಇದರಲ್ಲಿ ಪುರಾತನ ರೋಮನ್ನರ, ಗ್ರೀಕ್, ಈಜಿಪ್ಟ್ ನಾಗರಿಕತೆಗೆ ಸಂಬಂಧಿಸಿದ ವಸ್ತು ವಿಶೇಷಗಳನ್ನು ನೋಡಬಹುದು. ವಿಲ್ಲಾಗಿಯೂಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ರೋಮನ್ನರ ಮುನ್ನಿನ ಕೇಂದ್ರ ಇಟಲಿಯ ಕಲಾ ವಸ್ತುಗಳ ಅಮೂಲ್ಯ ಸಂಗ್ರಹವಿದೆ. ರೋಮನ್ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಗ್ರೀಕ್ ಮತ್ತು ರೋಮನ್ನರ ವಿವಿಧ ಶಿಲ್ಪಗಳ ಸಂಗ್ರಹವಿದೆ. ವಿಲ್ಲಾ ಬೊರೊಗಿಸೆಯ ಸಂಗ್ರಹಾಲಯದಲ್ಲಿ ಸು. 14-16ನೆಯ ಶತಮಾನದ ಯುರೋಪಿನ ಪುನರುಜ್ಜೀವನ (ರೆನೆಸಾನ್ಸ್) ಕಾಲದ ಅನೇಕ ಅಮೂಲ್ಯ ಕಲಾಸಂಗ್ರಹವಿದೆ. ನ್ಯಾಷನಲ್ ಗ್ಯಾಲರಿ ಆಫ್ ಮಾಡ್ರರ್ನ್ ಆರ್ಟ್‍ನಲ್ಲಿ ಬೆಲೆಬಾಳುವ ಅಮೂಲ್ಯ ಚಿತ್ರಸಂಗ್ರಹವಿದೆ. ಇವೆಲ್ಲ ಆಗಿನ ತತ್ತ್ವಜ್ಞಾನಿಗಳು, ಕವಿಗಳು, ರೋಮನ್ ಚಕ್ರವರ್ತಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ರೋಮ್‍ನಲ್ಲಿ 1000ಕ್ಕಿಂತಲೂ ಹೆಚ್ಚು ಮ್ಯೂಸಿಯಮ್‍ಗಳು  ಮತ್ತು ಕಲಾಗ್ಯಾಲರಿಗಳಿದ್ದು ಪ್ರತಿವರ್ಷ 50 ಲಕ್ಷಕ್ಕೂ ಹೆಚ್ಚು ಜನ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ರೋಮ್‍ನಲ್ಲಿರುವ ಚರ್ಚುಗಳು, ಅರಮನೆಗಳು ಮತ್ತು ಸುಂದರ ಕಾರಂಜಿಗಳು ಪ್ರಪಂಚಪ್ರಸಿದ್ಧವಾದವು. ವ್ಯಾಟಿಕನ್ ನಗರದಲ್ಲಿರುವ ಸಂತ ಪೀಟರನ ಬೆಸಲಿಕ ಯುರೋಪಿನ ಅತ್ಯಂತ ದೊಡ್ಡ ಚರ್ಚ್. ಪುನರು ಜ್ಜೀವನ ಕಾಲದ ಕಟ್ಟಡ ಶೈಲಿಗೆ ಇದು ಗುರುತಾಗಿದೆ. ಮೈಕೆಲಂಜೆಲೋ 1500ರಲ್ಲಿ ಈ ಚರ್ಚನ್ನು ರೂಪಿಸಿದನೆನ್ನುವರು. ಈ ಚರ್ಚಿನ ಒಳಗೆ ಅನೇಕ ಅಮೂಲ್ಯ ಕಲಾಕೃತಿಗಳನ್ನು ಅಳವಡಿಸಲಾಗಿದೆ. ರೋಮ್‍ನಲ್ಲಿ 1400ರಲ್ಲಿ ಕಟ್ಟಿದ ವೆನಿಸಿóಯ ಅರಮನೆಯನ್ನು ಮುಸ್ಸೋಲಿನಿ 1920-30ರಲ್ಲಿ ತನ್ನ ಆಡಳಿತ ಕಚೇರಿಯನ್ನಾಗಿ ಮಾಡಿಕೊಂಡಿದ್ದ. ಈಗ ಇದೊಂದು ಕಲಾ ಕೇಂದ್ರವೆನಿಸಿದೆ. ಇಟಲಿಯ ಮೆಡಿಸಿ ಕುಟುಂಬಕ್ಕೆ ಸೇರಿದ್ದ ಮಡಮ ಅರಮನೆ 1871ರಿಂದ ಇಟಲಿಯ ಸೆನೆಟಿನ ಅಂಗಳವಾಗಿದೆ. 1870ರವರೆಗೆ ಪೋಪ್‍ರ ನೆಲೆಯಾಗಿದ್ದು 1871ರಿಂದ 1946ರವರೆಗೆ ಇಟಲಿಯ ರಾಜರಿಗೆ ಸೇರಿದ್ದ ಕ್ವಿರಿನಲ್ ಅರಮನೆ ಇಟಲಿಯ ಅಧ್ಯಕ್ಷರ ಭವನವಾಗಿದೆ. ಇಟಲಿಯ ಕಲಾ ವೈಭವವನ್ನು ಸಾರುವ ಅನೇಕ ಜಲಕಾರಂಜಿಗಳಿವೆ. ಅವುಗಳಲ್ಲಿ 1762ರಲ್ಲಿ ನಿರ್ಮಿಸಿದ ಟ್ರಿವಿ ಬಹುಪ್ರಸಿದ್ಧವಾದುದ್ದು. ರೋಮಿನ ಪಿಜ್ಜನ ವನದಲ್ಲಿರುವ ನೆಪ್‍ಚ್ಯೂನ್ ಕಾರಂಜಿ ಬಹು ಸುಂದರವಾಗಿದ್ದು ಸುತ್ತಲೂ ಅರಮನೆಗಳಿಂದ ಚರ್ಚ್‍ಗಳಿಂದ ಸುತ್ತುವರೆದಿದೆ.

ಇತಿಹಾಸ: ಪುರಾತನ ನಾಗರಿಕತೆಯ ತೊಟ್ಟಿಲೆನಿಸಿದ ರೋಮ್ ಐತಿಹಾಸಿಕ ನಗರ. ರೋಮನ್ನು ಕ್ರಿ.ಪೂ. 753ರಲ್ಲಿ ಸ್ಥಾಪಿಸಲಾಯಿತು. ಪುರಾಣ ಕಾಲದಲ್ಲಿ ಟೈಬರ್ ನದಿ ದಂಡೆಯಲ್ಲಿ ರೋಮ್ ಸಾಮ್ರಾಜ್ಯ ಸ್ಥಾಪಿಸಿ ರಕ್ಷಿಸುವ ಸಲುವಾಗಿ ರೊಮ್ಯುಲಸ್ ಮತ್ತು ರೀಮಸ್‍ರು ಹೆಣ್ಣು ತೋಳದಿಂದ ಸಾಕಲ್ಪಟ್ಟ ದೇವರಮಕ್ಕಳು. ಆ ಸಹೋದರರ ಹೆಸರಿಗೆ ಸಂಬಂಧಪಟ್ಟ ಹಾಗೆ ನಗರವನ್ನು ರೋಮ್ ಎಂದು ಕರೆಯಲಾ ಯಿತು. ಈ ನಗರ ಕಂಚಿನ ಯುಗದಲ್ಲಿ ಕ್ರಿ.ಪೂ.1500ರಲ್ಲಿಯೇ ಬೃಹತ್ ಕಟ್ಟಡಗಳು, ಕೋಟೆಗಳು, ಚರ್ಚ್‍ಗಳಿಗೆ ಪ್ರಮುಖವಾಗಿದ್ದುದಾಗಿತ್ತು. ಅದು ಕ್ರಿ.ಪೂ. 1000ದಿಂದ ಕ್ರಿ.ಪೂ. 600ರವರೆಗೆ ರಾಜಕೀಯವಾಗಿ ಭಾರತೀಯ-ಯುರೋಪ್ ಸಂಸ್ಕøತಿಯೊಡನೆ ಸಂಬಂಧವನ್ನುಂಟು ಮಾಡಿತ್ತು. 1 ಮತ್ತು 2ನೆಯ ಶತಮಾನದಲ್ಲಿ ರೋಮ್ ಪ್ರಪಂಚದಲ್ಲಿಯೇ ಶಕ್ತಿ ಮತ್ತು ಹೆಮ್ಮೆಯ ಸಾಮ್ರಾಜ್ಯವಾಗಿ ಅಭಿವೃದ್ಧಿಹೊಂದಿ ಇಟಾಲಿಯನ್ನರ ಆಳಿಕೆಗೆ ಒಳಪಟ್ಟಿತ್ತು.

6ನೆಯ ಶತಮಾನದಲ್ಲಿ ರೋಮನ್ ಸಂರಕ್ಷಣೆ ಸಂಪೂರ್ಣವಾಗಿ ರೋಮನ್‍ಕೆಥೊಲಿಕ್ ಚರ್ಚ್‍ಗಳ ಅಧೀನಕ್ಕೆ ಒಳಪಟ್ಟಿತ್ತು. 1143ರ ರೋಮ್‍ಕ್ರಾಂತಿ ಮತ್ತು 1420ರ ಸ್ಯಾವಲನ್ನ ಆಡಳಿತದ ಅನಂತರ ರೋಮ್ ಸಾಮ್ರಾಜ್ಯ ವಿಸ್ತಾರವಾಯಿತು. 1871ರಲ್ಲಿ ರೋಮ್ ಇಟಲಿಯ ರಾಜಧಾನಿಯಾಯಿತು. 1920ರ ಮುಸ್ಸೋಲಿನಿ ಕ್ರಾಂತಿಯಿಂದಾಗಿ ರೋಮ್‍ನ ಪುರಾತನ ನಾಗರಿಕತೆ ಮತ್ತು ವೈಭವ ಪುನಃ ಸ್ಥಾಪಿತ ವಾಯಿತು. ಇದು ಅಗಸ್ಟಸ್ ಸೀಸರ್(ಕ್ರಿ.ಪೂ. 63-ಕ್ರಿ.ಶ.14), ಮಾರ್ಕಸ್ ಆರಿಲಿಯಸ್(121-180), ತತ್ತ್ವಜ್ಞಾನಿ ಅರಸ ಸೀಸರ್ ಬೊರ್ಜಿಯ(1476-1507) ಮೊದಲಾದ ಸೈನ್ಯಾಧಿಕಾರಿಗಳು ಇಲ್ಲಿ ಆಳಿದರು.

ಒಂದೆಡೆ ಅವಶೇಷ ನಗರವಾಗಿ ಪ್ರಾಚೀನ ರೋಮ್ ಕಂಡುಬಂದರೆ, ಮತ್ತೊಂದೆಡೆ ಪೋಪರ ಕಾಲದ ರೋಮ್, ಮಗದೊಂದುಕಡೆ ಆಧುನಿಕ ರೋಮ್ - ಹೀಗೆ ಇದು ಗತಕಾಲದ ಸಂಸ್ಕøತಿಯ ಪ್ರತೀಕವಾಗಿದ್ದು ಅಮರ ನಗರವೆನಿಸಿದೆ. ಒಲಂಪಿಕ್ ಕ್ರೀಡೆಗಳಿಂದಲೂ ರೋಮ್ ನಗರ ಪ್ರಪಂಚ ಪ್ರಸಿದ್ಧವಾಗಿದೆ.

ರೋಮ್‍ನಗರದಲ್ಲಿ ಈಗಲೂ ಪುರಾತನ ಬೃಹತ್ ಕಟ್ಟಡಗಳ ಚರಿತ್ರಾರ್ಹ ಅವಶೇಷಗಳನ್ನು ನೋಡಬಹುದು. ಆ ಕಾಲದ ಜನ ಸಾರ್ವಜನಿಕ ಚರ್ಚೆಗೆ ಬಳಸುತ್ತಿದ್ದ ಕೂಡು ಚೌಕಗಳಲ್ಲಿನ ಕಟ್ಟಡಗಳೂ ದೇವಾಲಯಗಳೂ ಸ್ನಾನಗೃಹಗಳೂ ಗ್ಲಾಡಿಯೇಟರ್ಸ್ ಎಂದು ಕರೆಯುತ್ತಿದ್ದ ತರಬೇತಿ ಹೊಂದಿದ ಶೂರ ಸೈನಿಕ ಹೋರಾಟಗಾರರು ಪರಸ್ಪರ ಕಾದಾಡುತ್ತಿದ್ದ ಕ್ರಿ.ಶ. 8ನೆಯ ಶತಮಾನದ ತೆರೆದ ಸ್ಥಳಗಳೂ ಇವೆ. ಬಯಲು ರಂಗಮಂದಿರವಿದ್ದಂತೆ ಆಗಿನ ಜನರಿಗೆ ಕಾದುವಬಯಲು  ಯುದ್ಧಭೂಮಿಯೂ ಇದ್ದು ಅದು ಜನರಂಜನೆಗೂ ಅವಕಾಶ ಮಾಡಿಕೊಡಲಾಗಿತ್ತು. ಯುದ್ಧಕೈದಿಗಳ ಪರಸ್ಪರ ಹೋರಾಟ ಸಾವಿನಲ್ಲಿ ಪರ್ಯಾವಸಾನವಾಗುತ್ತಿತ್ತು. ವೀರರು ಕಾಡುಮೃಗಗಳೊಡನೆ ಹೋರಾಡುವುದೂ ಮನರಂಜನೆಯ ಜನರಂಜನೆಯ ಒಂದು ಭಾಗ ವಾಗಿತ್ತು. ತಮ್ಮ ಧರ್ಮಕ್ಕೆ ವಿರುದ್ಧವಾಗಿ ಬೆಳೆಯುತ್ತಿದ್ದ ಕ್ರಿಸ್ತಧರ್ಮ ವನ್ನು  ಹತ್ತಿಕ್ಕುವ ಕಾರ್ಯವಾಗಿ ಸೆರೆಹಿಡಿದ ಕ್ರೈಸ್ತಧರ್ಮೀಯರನ್ನು ಸಿಂಹಗಳನ್ನು ಬಿಟ್ಟು ಕೊಲ್ಲಿಸಲಾಗುತ್ತಿತ್ತು. ಈ ಬಯಲು ಮಂದಿರಗಳ ಅವಶೇಷಗಳನ್ನು ಈಗಲೂ ಸಂರಕ್ಷಿಸಿಕೊಂಡು ಬರಲಾಗಿದೆ. ಹಾಗೆಯೇ 200ರ ಕಾರಕಲ್ಲ ಸಾಮೂಹಿಕ ಸ್ನಾನಗೃಹವನ್ನೂ ರಕ್ಷಿಸಿಕೊಂಡುಬರ ಲಾಗಿದೆ. 300ರಲ್ಲಿ ಕಟ್ಟಿದ್ದೆನ್ನುವ ಡಿಯೊಕ್ಲಿಸಿಯನ್ ಸ್ನಾನಗೃಹ ಏಕಕಾಲದಲ್ಲಿ 3000 ಮಂದಿಗೆ ಅವಕಾಶ ಒದಗಿಸುವಂತಹ ದೊಡ್ಡದೂ ವಿಶಾಲವೂ ಆದದ್ದಾಗಿತ್ತು. ಸ್ನಾನಗೃಹಗಳನ್ನು ಅಮೃತಶಿಲೆಯಿಂದ ಭವ್ಯವಾಗಿ ಕಟ್ಟಲಾಗುತ್ತಿತ್ತು. ಅಲ್ಲಿ ಅನೇಕ ಸುಂದರ ವಿಗ್ರಹಗಳಿಂದ, ವಿವಿಧ ಬಣ್ಣಗಳ ಗಾಜುಗಳಿಂದ ರಚಿಸಿದ ಚಿತ್ರಗಳಿಂದ ಅಲಂಕರಿಸಲಾಗಿದೆ. ರೋಮನ್ನರು ತಮ್ಮ ದೇವತೆಗಳಿಗಾಗಿ ಕಟ್ಟಿದ ಪಾನ್‍ಥಿಯನ್ (ದೇವಾಲ ಯಗಳು)ಗಳನ್ನು ಎಚ್ಚರಿಕೆಯಿಂದ ರಕ್ಷಿಸಿಕೊಂಡು ಬರಲಾಗಿದೆ. ಸು. 315ರಲ್ಲಿ ನಿರ್ಮಿಸಿದ ಕಾನ್‍ಸ್ಟಾನ್‍ಟೈನ್ ವಿಶೇಷವಾಗಿ ಅಲಂಕೃತವಾಗಿದ್ದು ಎಚ್ಚರಿಕೆಯಿಂದ ಇಂದಿನವರೆಗೂ ರಕ್ಷಿಸಿಕೊಂಡು ಬರಲಾಗಿದೆ. ಒಂದು ದೊಡ್ಡ ಸಾರ್ವಜನಿಕ ಉದ್ಯಾನವನದ ಮಧ್ಯದಲ್ಲಿ ದೊಮಸ್ ಆರಿಯ (ಹೊನ್ನಿನ ಮನೆ) ಎನ್ನುವ ಭೂಗತವಾಗಿರುವ ದೊಡ್ಡ ಬಂಗಲೆಯಿದೆ. ಇದು ಚಕ್ರವರ್ತಿ ನೀರೋನ ಅರಮನೆಯಾಗಿ ತ್ತೆಂದು ಹೇಳುವರು. ವಿಶಾಲ ಪ್ರದೇಶವನ್ನಾವರಿಸಿರುವ ಇದರ ಕೆಲವು ಗೋಡೆಗಳ ಮೇಲೆ ಬಣ್ಣ ಬಳಿಯಲಾಗಿದ್ದು ಇಂದಿಗೂ ಅದನ್ನು ನೋಡಬಹುದಾಗಿದೆ. ರೋಮನ್ನರು ಯುದ್ಧಗಳಲ್ಲಿಗಳಿಸಿದ ಜಯಕ್ಕಾಗಿ ಸು. 100ರಲ್ಲಿ ಕಟ್ಟಿಸಿದ ಮಾರ್ಕಸ್ ಆರೇಲಿಯಾಸ್ ಕಟ್ಟಡವಿದ್ದು ಇದರಲ್ಲಿ ಯುದ್ಧದ ಚಿತ್ರಗಳನ್ನು ಬಿಡಿಸಲಾಗಿದೆ. ಇಲ್ಲಿ ನಿಂತಿರುವ ಸಂತಪಾಲನ ವಿಗ್ರಹವಿದೆ(1589). ಕ್ರಿ.ಪೂ. 28ರಲ್ಲಿ ರೋಮನ್ನರ ಮೊದಲ ಚಕ್ರವರ್ತಿ ಅಗಸ್ಟಸ್ ತನಗೂ ತಮ್ಮ ಕುಟುಂಬ ವರ್ಗದವರಿಗೂ ಕಟ್ಟಿಸಿದ ಭವ್ಯ ಸಮಾಧಿ(ಮಾಸೊಲೀಯಂ) ಈಗಲೂ ಆಕರ್ಷಕ ಸ್ಥಳವಾಗಿದೆ. ಹೊರಗಿನವರ ಆಕ್ರಮಣ ತಡೆಗಟ್ಟಲು ಸು. ಕ್ರಿ.ಪೂ.200ರಲ್ಲಿ ಕಟ್ಟಿದ ರಕ್ಷಣಾಗೋಡೆಗಳ ಅವಶೇಷಗಳಿವೆ.

ಜರ್ಮನಿಕ್ ಬುಡಕಟ್ಟು ಆಡಳಿತಕ್ಕೆ ಒಳಪಟ್ಟ ರೋಮ್ ಅವನತಿ ಯತ್ತ ಹೊರಳಿತು. ಬಿಜಾಂಟೀಯನ್‍ನ ಚಕ್ರವರ್ತಿ ಒಂದನೆಯ ಜಸ್ಟೀನಿಯನನು ಆಸ್ಟ್ರೋಗೋತ್‍ರನ್ನು 500ರ ನಡುವೆ ರೋಮಿನಿಂದ ಹೊರಗಟ್ಟಿ ರೋಮನ್ನರ ಆಳಿಕೆಯನ್ನು ಸ್ಥಾಪಿಸಿದ. ರೋಮ್ 700ರ ಹೊತ್ತಿಗೆ ಪೋಪ್‍ರ ಪ್ರಭಾವದಿಂದ ಹೆಚ್ಚು ಬಲವಾಯಿತು. ಲಂಬಾರ್ಡರು ರೋಮನ್ನು ಆಕ್ರಮಿಸುವುದನ್ನು ಎರಡನೆಯ ಪೋಪ್ ಸ್ಟೀಫನ್, ಫ್ರಾಕನ್ನರ ರಾಜನಾದ ಪೆಪಿನ್ನನ ಸಹಾಯದಿಂದ ತಡೆದ. 756ರಲ್ಲಿ ಪೆಪಿನ್ ರೋಮನ್ನೂ ಅದರ ಸುತ್ತಲ ಪ್ರದೇಶವನ್ನೂ ಪೋಪರಿ ಗೊಪ್ಪಿಸಿದ. ಇಟಲಿಯ ದೇಶಾಭಿಮಾನಿ ಕೊಲ ಡಿ ರಿಯಿಂಜೊ ಎಂಬಾತ 1347ರಲ್ಲಿ ಪ್ರಥಮವಾಗಿ ಪ್ರಜಾಪ್ರಭುತ್ವ ಸ್ಥಾಪಿಸಿದ. ಆದರೆ ಮುಂದಿನ ದಿನಗಳ ಹೋರಾಟದಲ್ಲಿ ಆತ ಸತ್ತ. ಪುನರುಜ್ಜೀವನಕಾಲದಲ್ಲಿ ರೋಮ್ ಬಹಳಷ್ಟು ಅಭಿವೃದ್ಧಿಹೊಂದಿತು. 1527ರಲ್ಲಿ ಜರ್ಮನ್ ಮತ್ತು ಸ್ಪ್ಯಾನಿಷ್ ಸೈನ್ಯ ರೋಮನ್ನು ಲೂಟಿಮಾಡಿ ಸಾವಿರಾರು ರೋಮನ್ನರನ್ನು ಕೊಂದಿತು. ಮುಂದೆ 1500ರ ಉಳಿದ ಕಾಲದಿಂದ 1600ರ ವರೆಗೆ ಬಂದ ಪೋಪರು ಅನೇಕ ದೊಡ್ಡ ಕಟ್ಟಡಗಳನ್ನು ನಿರ್ಮಿಸಿ ರೋಮನ್ನು ಮತ್ತೆ ವೈಭವಕ್ಕೆ ತಂದರು.   

1798ರಲ್ಲಿ ನೆಪೊಲೀಯನ್ ಇಟಲಿ ಪರ್ಯಾಯ ದ್ವೀಪವನ್ನು ತನ್ನ ವಶಪಡಿಸಿಕೊಂಡು ರೋಮನ್ನು ತನ್ನ ಚಕ್ರಾಧಿಪತ್ಯದ ಎರಡನೆಯ ರಾಜಧಾನಿಯನ್ನಾಗಿ ಘೋಷಿಸಿದ. ಪೋಪರಿಗೆ ಇದ್ದ ಎಲ್ಲ ರಾಜಕೀಯ ಅಧಿಕಾರವನ್ನು ಕಿತ್ತುಹಾಕಿದ. ಇದನ್ನು ವಿರೋಧಿಸಿದ 7ನೆಯ ಪೋಪ್ ಪಿಯಸ್‍ನನ್ನು ಸೆರೆಗೆ ಹಾಕಿಸಿದ. ನೆಪೊಲೀಯನ್ನನ ಸೋಲಿನ ಅನಂತರ 1815ರಲ್ಲಿ ಮತ್ತೆ ಪೋಪರು ಹಿಂದಿನಂತೆ ಎಲ್ಲ ಅಧಿಕಾರಗಳನ್ನು ವಶಪಡಿಸಿಕೊಂಡರು. 1800ರಲ್ಲಿ ಇಟಲಿಯ ಸ್ವಾತಂತ್ರ್ಯಕ್ಕಾಗಿ ಹೋರಾಟ ಪ್ರಾರಂಭವಾಯಿತು. 1848ರಲ್ಲಿ ಕ್ರಾಂತಿಕಾರರು ಇಟಲಿಯನ್ನು ಗಣರಾಜ್ಯವನ್ನಾಗಿ ಘೋಷಿಸಿದರು. 9ನೆಯ ಪೋಪ್ ಪಿಯಸ್ ಇದನ್ನು ವಿರೋಧಿಸಿ, ಓಡಿಹೋಗಬೇಕಾಯಿತು. ಆದರೆ 1849ರಲ್ಲಿ ಫ್ರೆಂಚ್ ಸೈನ್ಯ ರೋಮನ್ನು ವಶಪಡಿಸಿಕೊಂಡು ಮತ್ತೆ ಪೋಪರನ್ನು ಅಧಿಕಾರಕ್ಕೆ ತಂದಿತು. 1861ರಲ್ಲಿ ಇಟಲಿಯ ಚಕ್ರವರ್ತಿ ಎರಡನೆಯ ವಿಕ್ಟರ್ ಎಮಾನ್ಯುಯಲ್ ಕಾಲದಲ್ಲಿ ರೋಮ್ ಇಟಲಿಯ ರಾಜಧಾನಿ ಯಾಗಿರಲಿಲ್ಲ. ಇಟಲಿಯ ಸ್ವಯಂಸೇವಕರು 1867ರಲ್ಲಿ ರೋಮನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಫ್ರೆಂಚ್ ಸೈನಿಕರು ಇದಕ್ಕೆ ಅವಕಾಶ ನೀಡಲಿಲ್ಲ. 1870ರಲ್ಲಿ ಫ್ರೆಂಚರ ನಿರ್ಗಮನವಾದ ಬಳಿಕ ವಿಕ್ಟರ್ ಎಮಾನ್ಯುಯಲ್ ಯಾವ ಪ್ರತಿರೋಧವೂ ಇಲ್ಲದೆ ರೋಮನ್ನು ಪ್ರವೇಶಿಸಿದ. ಪೋಪರ ಅಧಿಕಾರವನ್ನೆಲ್ಲ ಹಿಂದಕ್ಕೆ ಪಡೆದ. ಇದನ್ನು ಪ್ರತಿಭಟಿಸಿ 9ನೆಯ ಪೋಪ್ ಪಿಯಸ್ ವ್ಯಾಟಿಕನ್ ನಗರದಲ್ಲಿರತೊಡಗಿದ. 1871ರಲ್ಲಿ ವಿಕ್ಟರ್ ಎಮಾನ್ಯುಯಲ್ ರೋಮನ್ನು ಇಟಲಿಯ  ರಾಜಧಾನಿಯನ್ನಾಗಿ ಮಾಡಿಕೊಂಡ. ಮುಂದೆ 1929ರಲ್ಲಿ ಆದ ಒಪ್ಪಂದದಂತೆ ರೋಮನ್ನು ಇಟಲಿಯ ರಾಜಧಾನಿಯಾಗಿ ರೋಮನ್ ಕೆಥೊಲಿಕರ ಧರ್ಮಾಧಿಕಾರಿಗಳೆಲ್ಲ ಒಪ್ಪಿದರು. ವ್ಯಾಟಿಕನ್ ನಗರವನ್ನು ಒಂದು ಸ್ವತಂತ್ರ ರಾಜ್ಯವೆಂದು ಪರಿಗಣಿಸಲಾಯಿತು. ರೋಮನ್ನು ಆಳಿದ ಚಕ್ರವರ್ತಿಗಳಲ್ಲಿ ಜೂಲಿಯಸ್ ಸೀಸರ್‍ನನ್ನು ವಿಲಿಯಂ ಷೇಕ್ಸ್‍ಪಿಯರ್ ತನ್ನ ನಾಟಕದ ಮೂಲಕ ಎಲ್ಲಾ ದೇಶದವರಿಗೆ ಪರಿಚಯಿಸುವುದರ ಜೊತೆ ಜೊತೆಯಲ್ಲೆ ರೋಮನ್ ಸಾಮ್ರಾಜ್ಯದ ಪ್ರಚಾರವೂ ಆಯಿತು. ಬೆನಿಟೊ ಮುಸ್ಸೋಲಿನಿ ಸರ್ವಾಧಿಕಾರಿ ಇಟಲಿಯನ್ನೂ ರೋಮನ್ನೂ ಒಂದು ಶಕ್ತಿಶಾಲಿ, ಸುಂದರ ರಾಷ್ಟ್ರ ಹಾಗೂ ನಗರವನ್ನಾಗಿ ಮಾಡಿದ ನೆಂದು ಪರಿಗಣಿಸಲಾಗಿದೆ. ಈತ 1935ರಲ್ಲಿ ರೋಮ್ ವಿಶ್ವವಿದ್ಯಾಲಯದ ಆವರಣವನ್ನು ಪೂರ್ಣಗೊಳಿಸಿದ. 1938ರಲ್ಲಿ ಕೇಂದ್ರ ರೈಲು ನಿಲ್ದಾಣ ಪ್ರಾರಂಭಿಸಿದ. ಮುಸ್ಸೋಲಿನಿ 1938ರಲ್ಲಿ ಪ್ರಾರಂಭಿಸಿದ್ದ ಯೂನಿವರ್ಸಲ್ ಎಕ್ಸಿಬಿಷನ್ ಆಫ್ ರೋಮ್ ಇಂದು ರೋಮ್‍ನ ಒಂದು ದೊಡ್ಡ ವ್ಯಾಪಾರ ವಾಣಿಜ್ಯ ಕೇಂದ್ರವಾಗಿದೆ.	
								(ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ